ಖ್ಯಾತ ತಾರೆಯರಿಂದ ಹಾಸನಾಂಬೆ ದರ್ಶನ
Oct 14 2025, 01:00 AM ISTಹಾಸನದ ಖ್ಯಾತ ಚಲನಚಿತ್ರ ನಟಿ ತಾರಾ ಮತ್ತು ನಟಿ ಅಂಜಲಿ ಅವರು ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದರು. ಇಬ್ಬರೂ ತಾಯಿಗೆ ಮೊಡಿಲಕ್ಕಿ, ಸೀರೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ತಾರಾ, ಹಾಸನ ನನಗೆ ಹೊಸ ಸ್ಥಳವಲ್ಲ. ನಾನು ಬಣ್ಣ ಹಚ್ಚಿದ ಮೊದಲ ಚಿತ್ರವೂ ಈ ಜಿಲ್ಲೆಯಲ್ಲಿ ಶೂಟ್ ಆಗಿತ್ತು. ಬಯಲುಸೀಮೆ ಹುಡುಗ, ಮಲೆನಾಡು ಹುಡುಗಿ, ಮೈಸೂರು ಹುಡುಗ ಸೇರಿದಂತೆ ಹಲವು ಚಿತ್ರಗಳ ಸ್ಮೃತಿಗಳು ಹಾಸನಕ್ಕೆ ಸಂಬಂಧಿಸಿದೆ ಎಂದು ನೆನಪಿಸಿಕೊಂಡರು. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇನೆ. ಆದರೆ ಈ ಬಾರಿ ದೇವಾಲಯದಲ್ಲಿ ಕಂಡುಬಂದ ಅನುಕೂಲತೆಗಳು, ಶಿಸ್ತಿನ ವ್ಯವಸ್ಥೆ ಹಾಗೂ ಭಕ್ತರಿಗಾದ ಸೌಲಭ್ಯಗಳು ಪ್ರಶಂಸನೀಯವಾಗಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಎಲ್ಲರಿಗೂ ಧನ್ಯವಾದಗಳು ಎಂದರು.