ಹಾಸನಾಂಬೆ ದರ್ಶನ ಪಡೆದ ನೂತನ ಡೀಸಿ ಲತಾಕುಮಾರಿ
Jun 19 2025, 11:49 PM ISTನೂತನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಕಚೇರಿಗೆ ಬರುವುದಕ್ಕೂ ಮೊದಲು ನಗರದಲ್ಲಿರುವ ಅಧಿದೇವತೆ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ನೂತನ ಡೀಸಿ ಕೆ.ಎಸ್. ಲತಾಕುಮಾರಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ತಂದೆ- ತಾಯಿ ಅವರ ಉಪಸ್ಥಿತಿಯಲ್ಲಿ ಉನ್ನತ ಹುದ್ದೆಯ ಅಧಿಕಾರ ಸ್ವೀಕರಿಸಿರುವುದು ತುಂಬ ಸಂತೋಷ ತಂದಿದೆ. ತಂದೆ ಅವರಿಂದ ಹಸಿರು ಇಂಕಿನ ಪೆನ್ನು ಪಡೆದು ಸಿಟಿಸಿಗೆ ಸಹಿ ಮಾಡಿದ್ದು, ನಾನು ಉನ್ನತ ಹುದ್ದೆಗೇರುವುದು ನಮ್ಮ ತಂದೆ ಅವರ ಕನಸ್ಸಾಗಿತ್ತು ಎಂದು ತಿಳಿಸಿದರು.