ದಲಿತ ಸಂಘಟನೆಗಳೆಲ್ಲಾ ಒಂದಾದ್ರೆ ನೊಂದವರಿಗೆ ನ್ಯಾಯ: ಶಾಸಕ ಕೆ.ಎಸ್.ಬಸವಂತಪ್ಪ
Feb 25 2024, 01:47 AM ISTದಲಿತ ಸಂಘಟನೆಗಳೆಲ್ಲವೂ ಒಂದಾಗಿ, ಸಂಘಟಿತ ಚಳವಳಿ ಕಟ್ಟಿದರೆ ನೊಂದ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಡಿಎಸ್ಸೆಸ್ನ 50ನೇ ಸಂಸ್ಥಾಪನ ವರ್ಷಾಚರಣೆಯ ಇಂದಿನ ಸಮಾರಂಭದಲ್ಲೇ ಇಂತಹದ್ದೊಂದು ಆಲೋಚನೆ, ಪ್ರಯತ್ನಕ್ಕೆ ಮುಂದಾಗಿ. ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಉದ್ದೇಶಕ್ಕೆ ಪೂರಕವಾಗಿ ದಮನಿತರು, ಶೋಷಿತರ ಧ್ವನಿಯಾಗಿ, ಅಂತಹವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸವನ್ನು ಡಿಎಸ್ಸೆಸ್ ಮಾಡುವಂತಾಗಲಿ.