ದಸರಾ ಸಂಗೀತ ಸಂಜೆ: ರಾಜೇಶ್ ಕೃಷ್ಣನ್ ಹಾಡಿನ ಮೋಡಿ
Oct 21 2023, 12:30 AM ISTಪ್ರೇಕ್ಷಕರನ್ನು ಹಿಡಿದಿಡಲು ಚಾಮರಾಜನಗರ ಜಿಲ್ಲಾ ದಸರಾದ ಕೊನೆಯ ದಿನ ರಾಜೇಶ್ ಕೃಷ್ಣನ್ ಸಂಗೀತ ಯಶಸ್ವಿಯಾಯಿತು. ಆರಂಭದ ಮೂರು ದಿನ ಪ್ರೇಕ್ಷಕರ ಕೊರತೆ ಎದುರಿಸಿದ್ದ ಕಾರ್ಯಕ್ರಮಗಳಿಗೆ ರಾಜೇಶ್ ಕೃಷ್ಣನ್ ಕಾರ್ಯಕ್ರಮ ಮೆರುಗು ನೀಡಿತು. ರಥದ ಬೀದಿ, ದೇವಾಲಯ ಮುಂಭಾಗ, ಚಾಮರಾಜೇಶ್ವರ ಉದ್ಯಾನವನದವರೆಗೂ ಜನರು ನಿಂತು ರಾಜೇಶ್ ಕೃಷ್ಣನ್ ಅವರ ಹಾಡಿನ ಮೋಡಿಗೆ ಕುಣಿದು ಕುಪ್ಪಳಿಸಿದರು.