ದಸರಾ ವೈಭವ ಬಿಂಬಿಸುವ ಬೊಂಬೆಗಳ ಪ್ರದರ್ಶನ
Oct 17 2023, 12:46 AM ISTಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯ ನಾಗರತ್ನಮ್ಮ ನಾರಾಯಣ ಭಟ್ಟ ಜ್ಞಾನ ಮಂದಿರದಲ್ಲಿ ನವರಾತ್ರಿ ಮಹತ್ವ ಸಾರುವ ಮಾದರಿಯಲ್ಲಿ ದಸರಾ ವೈಭವ ಬಿಂಬಿಸುವ ಬೊಂಬೆಗಳ ಪ್ರದರ್ಶನ ನಡೆಯುತ್ತಿದೆ.ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳ ದಂಪತಿಗಳು ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಾವಿರಾರು ಬೊಂಬೆಗಳ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ. ಬೊಂಬೆಗಳನ್ನು ಸಾರ್ವಜನಿಕರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.