ಅಧಿಕಾರಿಗಳ ನಿರ್ಲಕ್ಷ್ಯದಿಂದ ಭದ್ರಾ ನೀರು ವ್ಯರ್ಥ: ಎಂ. ನರೇಂದ್ರ
Jul 06 2024, 12:51 AM ISTತರೀಕೆರೆ, ರೈತರ ಜೀವನ ನಾಡಿ ಕುಡಿಯುವ ನೀರಿನ ಅಕ್ಷಯ ಭದ್ರ ಡ್ಯಾಮ್ ನಲ್ಲಿ ಡ್ರಿಪ್ ಯೋಜನೆಯಡಿ ಕೈಗೊಂಡ ಕಳಪೆ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಣೆಕಟ್ಟೆ ಗೇಟ್ ಹಾಕಲಾಗದೆ ನೀರು ವ್ಯರ್ಥವಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೈತರು ಹಾಗೂ ಕುಡಿಯುವ ನೀರಿಗೆ ಆತಂಕ ಎದುರಾಗಿದೆ. ಈ ಸಂಬಂಧ ಅಧಿಕಾರಿ ಹಾಗೂ ಸಲಹೆಗಾರ ಸದಸ್ಯರನ್ನು ಅಮಾನತ್ತು ಮಾಡಿ ವಿಚಾರಣೆಗೆ ಒಳಪಡಿಸುವಂತೆ ತರೀಕೆರೆ ಜೆಡಿಎಸ್ ಅಧ್ಯಕ್ಷ, ಭದ್ರ ಹಿತರಕ್ಷಣ ಸಮಿತಿ ಸದಸ್ಯ ಎಂ. ನರೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.