ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ರೈತಸಂಘ ಪ್ರತಿಭಟನೆ
Jun 26 2024, 12:39 AM ISTಕಳೆದ ವರ್ಷ ಜಲಾಶಯದಲ್ಲಿ ಇರುವ ನೀರನ್ನು ತಮಿಳುನಾಡು ಹಿತ ಕಾಯಲು ಸರ್ಕಾರ ನದಿ ಮೂಲಕ ನೀರು ಹರಿಸಿ ಮಂಡ್ಯ ಜಿಲ್ಲೆಯ ರೈತರಿಗೆ ಬೇಸಿಗೆ ಹಂಗಾಮು ಬೆಳೆಗೂ ನೀರು ಕೊಡದೆ ಮೋಸ ಮಾಡಿತು. ಈಗ ಮುಂಗಾರು ಬೆಳೆಗೆ ಬಿತ್ತನೆ ಬೀಜ ಹಾಕಿ ಬೆಳೆ ಬೆಳೆಯಲು ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ನೀರಾವರಿ ಸಚಿವರು ಸೇರಿದಂತೆ ಸರ್ಕಾರದ ಮಂತ್ರಿಗಳು ಜಿಲ್ಲೆಯ ರೈತರಿಗೆ ನೀರು ಹರಿಸದೆ ಬರಡು ಭೂಮಿ ಮಾಡಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ.