ಉಪ ನೋಂದಣಿ ಕಚೇರಿ ಬದಲಾವಣೆಗೆ ದಸಂಸ ಆಗ್ರಹ
Jan 30 2024, 02:00 AM ISTಒಂದೇ ಸೂರಿನಡಿ ಎಲ್ಲಾ ಇಲಾಖೆಯೂ ಕೆಲಸ ಮಾಡಲಿ ಎಂದು ಬೃಹತ್ ಕಟ್ಟಡವನ್ನು ಕಟ್ಟಿದ್ದರು. ಉಪನೋಂದಣಿ ಕಚೇರಿ, ಸಿಡಿಪಿಒ ಕಚೇರಿ ಮತ್ತು ಅಬಕಾರಿ ಕಚೇರಿಗೆ ಮಿನಿ ವಿಧಾನಸೌಧದಲ್ಲಿ ಕಟ್ಟಡವನ್ನು ಕಾಯ್ದಿರಿಸಿದ್ದರು. ಅಲ್ಲಿಗೆ ಇಲಾಖೆಗಳನ್ನ ಸ್ಥಳಾಂತರ ಮಾಡದೇ ಖಾಸಗಿ ಕಟ್ಟಡಗಳಲ್ಲಿ ಸಾವಿರಾರು ರೂ ಬಾಡಿಗೆ ಹಣ ನೀಡಿ ಸಾರ್ವಜನಿಕ ಹಣವನ್ನು ಖಾಸಗಿಯವರ ಪಾಲುಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ.