ಮಾಸ್ತಿಗೌಡನ ಕೊಂದಿದ್ದವರಿಗೆ ಚನ್ನರಾಯಪಟ್ಟಣದಲ್ಲಿ ನಾಲ್ಕನೇ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ
May 09 2024, 01:04 AM ISTಹನ್ನೊಂದು ತಿಂಗಳ ಹಿಂದೆ ಮಧ್ಯಾಹ್ನದ ವೇಳೆ ನಡುರಸ್ತೆಯಲ್ಲಿ ರೌಡಿಶೀಟರ್ ಮಾಸ್ತಿಗೌಡನ ಹತ್ಯೆ ಮಾಡಿದ ೧೧ ಮಂದಿ ಅಪರಾಧಿಗಳಿಗೆ ಚನ್ನರಾಯಪಟ್ಟಣದ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ತರ ತೀರ್ಪು ನೀಡಿದೆ. ೧೧ ಮಂದಿ ಅಪರಾಧಿಗಳಲ್ಲಿ ೯ ಅಪರಾಧಿಗಳಿಗೆ ಕಠಿಣ ಕಾರಾಗೃಹ ವಾಸ, ಜೀವಾವಧಿ ಶಿಕ್ಷೆ ಹಾಗೂ ತಲಾ ೨೫ ಸಾವಿರ ರು. ದಂಡವನ್ನು ವಿಧಿಸಿದೆ.