ಪೊಲೀಸ್ ಅಂದ್ರೆ ಭಯವಲ್ಲ, ಭರವಸೆ: ಎಸ್ಪಿ ಅಮರನಾಥ ರೆಡ್ಡಿ
Feb 13 2024, 12:48 AM ISTಲೋಕಾಪುರ: ಪೊಲೀಸ್ ಅಂದರೆ ಭಯವಲ್ಲ, ಅದೊಂದು ಭರವಸೆ. ಪೊಲೀಸ್ ಠಾಣೆಗಳು ಇರುವುದು ಹೇದರಿಸುವುದಕ್ಕಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಸಾರ್ವಜನಿಕರ ಸೇವೆಗಾಗಿ ಈ ಇಲಾಖೆ ಇರುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು. ಸಮೀಪದ ವರ್ಚಗಲ್ಲ ಗ್ರಾಮದಲ್ಲಿ ಹಮ್ಮಿಕೊಂಡ ಪೊಲೀಸರು ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ ಗ್ರಾಮಗಳಿಗೆ ಹೋಗಿ ಅವರಿರುವ ಸ್ಥಳಗಳಲ್ಲಿ ಅವರ ಜೋತೆ ಚರ್ಚಿಸಿ ಅವರ ಸಮಸ್ಯೆ ಪೊಲೀಸ್ ಇಲಾಖೆಯಿಂದ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದಾಗಿದೆ ಎಂದರು.