ಸಾರಿಗೆ ಬಸ್- ಟಾಟಾ ಸುಮೋ ಡಿಕ್ಕಿ: 6 ಜನ ದುರ್ಮರಣ
Oct 17 2023, 12:46 AM ISTಕಲಬುರಗಿ ಜಿಲ್ಲೆಯ ಅಫಜಲಪುರದಿಂದ ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಬರುತ್ತಿದ್ದ ಭಕ್ತರಿದ್ದ ಟಾಟಾ ಸುಮೋ ಹಾಗೂ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಆರು ಜನರು ಮೃತರಾಗಿ, ಮೂವರು ತೀವ್ರ ಗಾಯಗೊಂಡ ದಾರುಣ ಘಟನೆ ನರೇಗಲ್ ಬಳಿ ಸೋಮವಾರ ಮುಂಜಾನೆ ಸಂಭವಿಸಿದೆ.