ಲಿಂಗಾಯತ- ಒಕ್ಕಲಿಗ ನಾಯಕತ್ವಕ್ಕೆ ಬಿಜೆಪಿ ಮಣೆ- ಅಶೋಕ್ ಪ್ರತಿಪಕ್ಷ ನಾಯಕ
Nov 18 2023, 01:00 AM ISTಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದ ಸರಿಯಾಗಿ ಒಂದು ವಾರದ ಬಳಿಕ, 6 ತಿಂಗಳಿಂದ ಖಾಲಿ ಇದ್ದ ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ಪ್ರಕ್ರಿಯೆಯೂ ಮುಗಿದಿದ್ದು, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಆರ್.ಅಶೋಕ್ ಅವರು ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ ಅಲಂಕರಿಸಲಿದ್ದಾರೆ.