ಯದುವೀರ್ ಬೆಂಬಲಿಸಲು ಬಿಜೆಪಿ ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶದಲ್ಲಿ ನಿರ್ಣಯ
Mar 25 2024, 12:46 AM ISTಮೈಸೂರು ರಾಜರು ಮಾಡಿರುವ ಕಲ್ಯಾಣದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಅವರು ಭಾರತವನ್ನು ಸುವರ್ಣ ಉತ್ತಂಗತ್ತ ಕೊಂಡೊಯ್ಯುತ್ತಿದ್ದು, ಮೈಸೂರು ಕೂಡ ಆ ಪ್ರಯೋಜನ ಪಡಯುವುದಿದೆ. ಹಾಗಾಗಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.ಮೈಸೂರು ಅರಮನೆ ಮತ್ತು ನಾಯಕ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಅರಮನೆಗೆ ಬೆಂಕಿ ಬಿದ್ದಾಗ ನಾಯಕ ಸಮಾಜದವರು ರಕ್ಷಿಸಿದರೆಂಬುದು ಗೊತ್ತಿದೆ. ಚಾಮುಂಡಿಬೆಟ್ಟದಲ್ಲಿ ತೇರು ಎಳೆಯುವವರು ನಾಯಕ ಸಮಾಜ. ಹಾಗಾಗಿ, ಈ ಸಮುದಾಯ ಇಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಾಗುವುದು