ಕಾಡಾನೆ ಹಾವಳಿಗೆ ಅಪಾರ ಬೆಳೆ ನಷ್ಟ
Nov 14 2024, 12:47 AM ISTಕಟಾವಿಗೆ ಬಂದ ಮುಸುಕಿನ ಜೋಳ, ಭತ್ತದ ಗದ್ದೆ, ತೆಂಗು ಬೆಳೆಗಳು ಆನೆ ದಾಳಿಗೆ ತುತ್ತಾಗಿದೆ. ನಾಗರತ್ನ ಅವರಿಗೆ ಸೇರಿದ ೨೦ ತೆಂಗಿನ ಮರದ ಜೊತೆ ಜೋಳದ ಬೆಳೆ ತುಳಿದು ನಾಶಪಡಿಸಿದೆ. ಯೋಗೇಶ್ ಎಂಬುವವರ ಒಂದೂವರೆ ಎಕರೆಯಷ್ಟು ಮುಸುಕಿನ ಜೋಳ ಹಾಡುಗೆಡವಿದೆ. ಚಂದ್ರಶೇಖರ್ ಅವರ ಎರಡು ಎಕರೆ ಜೋಳ, ದೇವರಾಜ್ ಅವರಿಗೆ ಸೇರಿದ ಗುಡ್ಡೆಹಾಕಿದ್ದ ಜೋಳದ ಮೇತೆಯನ್ನು ತಿಂದು ಹಾಕಿವೆ. ಮಲ್ಲೇಶ್ ಎಂಬುವರ ೬ ವರ್ಷದ ೧೨ ತೆಂಗಿನ ಮರವನ್ನು ಬುಡ ಸಹಿತ ಕಿತ್ತುಹಾಕಿವೆ.