ಮಾಡಾಳು ಶ್ರೀ ಮೂಲ‌ಸ್ವರ್ಣ ಗೌರಮ್ಮನವರ ದರ್ಶನಕ್ಕೆ ಭಕ್ತ ಸಾಗರ

Sep 12 2024, 01:49 AM IST
ಕೋಡಿಮಠ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮಾಡಾಳು ಗ್ರಾಮ ಯರೇಹಳ್ಳಿ ರಸ್ತೆ ಶ್ರೀ ಚನ್ನಬಸವೇಶ್ವರ ಚಲನಚಿತ್ರ ಮಂದಿರ ಹತ್ತಿರನೂತನವಾಗಿ ನಿರ್ಮಾಣಗೊಂಡಿರುವ ದೇವಾಲಯದಲ್ಲಿ ನಿರ್ಮಿಸಲಾಗಿರುವ ಶ್ರೀ ಮೂಲ ಸ್ವರ್ಣಗೌರಿ ಅಮ್ಮನವರ ಇತಿಹಾಸದ ಹೇಳಿಕೆ ನಂತರ ಪ್ರತಿದಿನ‌ ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಚಿನ್ನದ ಮೂಗುತಿ ಸಹಿತ ಅಮ್ಮನವರನ್ನು ದರ್ಶನ ಮಾಡುತ್ತಿದ್ದಾರೆ. ತಪಸ್ವಿ ಶಿವಲಿಂಗಜ್ಜಯ್ಯ ಸುಮಾರು 170 ವರ್ಷಗಳ ಹಿಂದೆ ನೀಡಿದ್ದ ಮೂಗುತಿ ಧರಿಸುತ್ತಿರುವ ಅಮ್ಮನವರ ದರ್ಶನದಿಂದ ಕಷ್ಟ ಕಾರ್ಪಣ್ಯಗಳು ಬಗೆಹರಿಯುತ್ತದೆ ಎಂದು ಭಕ್ತ ಕೋಟಿಯ ನಂಬಿಕೆಯಾಗಿದೆ.