ಭಾರತ್ ಸ್ಕೌಟ್ಸ್ ಗೈಡ್ಸ್ ಇರುವುದೇ ಸಮುದಾಯದ ಸೇವೆಗಾಗಿ
Oct 13 2025, 02:00 AM ISTಹಾಸನ ಜಿಲ್ಲಾಡಳಿತದ ಸಹಕಾರದಲ್ಲಿ ಪ್ರತಿವರ್ಷದಂತೆ ಸದರಿ ವರ್ಷವೂ ಸಹ ರಾಜ್ಯ ಮಟ್ಟದ ಸೇವಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,  ನಲವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ದಿನಕ್ಕೆ ಎರಡು ಪಾಳೆಯದಂತೆ ನಮ್ಮ ಮಕ್ಕಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರದಿ ಸಾಲಿನ ಶಿಸ್ತನ್ನು ಕಾಪಾಡುವುದು, ಬಾಯಾರಿದವರಿಗೆ ನೀರಿನ ಪೂರೈಕೆ ಮಾಡುವುದು, ವಯೋವೃದ್ಧರನ್ನು ವ್ಹೀಲ್‌ಚೇರಿನಲ್ಲಿ ಕರೆದುಕೊಂಡು ಹೋಗಿ ದರ್ಶನ ಮಾಡಿಸುವುದು, ಸ್ವಚ್ಛತಾ ಕಾರ್ಯ ಮಾಡುವುದು ಹೀಗೆ ಅನೇಕ ಕಡೆಗಳಲ್ಲಿ ಸೇವಾ ನಿರತರಾಗಿದ್ದಾರೆ ಎಂದು ವಿವರಿಸಿದರು.