ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆನ್‌ಲೈನ್‌ ಸಮೀಕ್ಷೆ ಕೈಗೊಳ್ಳಿ: ತರಳಬಾಳು ಶ್ರೀ

Dec 24 2023, 01:45 AM IST
ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆಯಾಗುತ್ತಿದೆಯೆಂಬುದಕ್ಕೆ ಮಿತ ಸಂತಾನ ಕಾರಣವವಲ್ಲ, ಮೀಸಲಾತಿ ಪಡೆಯಲಿಕ್ಕಾಗಿ ಒಳ ಪಂಗಡಗಳನ್ನು ಮುಂದಿಟ್ಟ ಕಾರಣಕ್ಕೆ ಸಮುದಾಯದ ಸಂಖ್ಯೆ ಕಡಿಮೆಯಾಗಿದೆ ಅಷ್ಟೇ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಒಳ ಪಂಗಡದ ಹೆಸರಿನಲ್ಲಿ ಹಂಚಿ ಹೋದ ಸಮುದಾಯವನ್ನು ಸರ್ಕಾರಕ್ಕಿಂತ ಮೊದಲೇ ಅಭಾವೀಮದಿಂದ ಆನ್‌ಲೈನ್‌ ಸಮೀಕ್ಷೆ ಕೈಗೊಂಡು, ವೀರಶೈವ ಲಿಂಗಾಯತರ ನಿಖಿರ ಜನಸಂಖ್ಯೆಯನ್ನು ಸರ್ಕಾರಕ್ಕೆ ಮಂಡಿಸಲಿ ಎಂದರು.