ವಿಶ್ವಕಪ್‌ ಗೆದ್ದು ಬಾ ಭಾರತ<bha>;</bha> ತಂಡಕ್ಕೆ ಶುಭ ಹಾರೈಕೆ

Nov 19 2023, 01:30 AM IST
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫೈನನ್‌ನಲ್ಲಿ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಕ್ರಿಕೆಟ್ ಅಭಿಮಾನಿ ಬಳಗದ ವತಿಯಿಂದ ವಿಶ್ವಕಪ್‌ ಪೈನಲ್‌ನಲ್ಲಿ ಇಂಡಿಯಾ ಗೆದ್ದು ಬರಲಿ ಎಂದು ಭಾರತಮಾತೆಯ ಫೋಟೋ ಹಿಡಿದು ಪ್ರಾರ್ಥಿಸಿ ಭಾರತ ಕ್ರಿಕೆಟ್‌ ತಂಡದ ಆಟಗಾರಿಗೆ ನೈತಿಕವಾಗಿ ಬೆಂಬಲ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ, ಎಚ್.ಸಿ ಯೋಗೇಶ್, ಪ್ರಮುಖರಾದ ಕೆ.ದೇವೇಂದ್ರಪ್ಪ, ಶಾಮೀರ್ ಖಾನ್ , ಕಾಶಿ ವಿಶ್ವನಾಥ್, ಅಫ್ತಾಜ್ ಪರ್ವಿಜ್, ಐಎನ್‌ಟಿಸಿ ಅಧ್ಯಕ್ಷ ಕವಿತಾ, ಅರ್ಜುನ್ ಪಂಡಿತ್ , ನೂರುಲ್ಲಾ, ಅರ್ಜುನ್ ಮತ್ತಿತರರು ಇದ್ದರು.

ಡ್ರೋನ್ ಬಳಕೆಯಿಂದ ಆತ್ಮನಿರ್ಭರ ಭಾರತ ಯೋಜನೆ ಫಲಪ್ರಧ

Nov 18 2023, 01:00 AM IST
ಬಾರತದ ಪ್ರಸ್ತುತ ಸನ್ನಿವೇಶದಲ್ಲಿ ಡ್ರೋಣ್ ತಂತ್ರಜ್ಞಾನದ ಅಳವಡಿಕೆ ವಿಶ್ವವಾಪಿಯಾಗಿದೆ. ನಮ್ಮ ಭಾರತೀಯ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಡ್ರೋಣ್ ತಂತ್ರಜ್ಞಾನವನ್ನು ಜನಪರವಾಗಿಸಿದ್ದಾರೆ. ಪ್ರಧಾನಮಂತ್ರಿಯವರ ಆತ್ಮನಿರ್ಭರ್ ಭಾರತ್ ಯೋಜನೆ ಫಲಪ್ರಧವಾಗುತ್ತಿದೆ ಎಂದು ಐಐಎಸ್ ಸಿ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ತಿಳಿಸಿದರುಶುಕ್ರವಾರ ನಗರ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ನಡೆದ ಏರೋಥಾನ್- 2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷವಾಗಿ ಡ್ರೋನ್ ತಂತ್ರಜ್ಞಾನದ ಅನ್ವಯಿಕ ಕ್ಷೇತ್ರದಲ್ಲಿ ಮುಂಬರುವ 5 ವರ್ಷಗಳಲ್ಲಿ 54 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದರು.