ಪ್ರತಿನಿತ್ಯ ಬಳಕೆಯಾದಲ್ಲಿ ಮಾತ್ರ ಭಾಷೆ ಉಳಿಯುತ್ತದೆ
Feb 25 2025, 12:49 AM ISTಯಾವುದೇ ಭಾಷೆ ಇರಲಿ ಅದನ್ನು ಪ್ರತಿನಿತ್ಯ ಬಳಸಿದಲ್ಲಿ ಮಾತ್ರ ಭಾಷೆ ಉಳಿಯುತ್ತದೆ ಎಂದು ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶಿವಕುಮಾರ್ ಪಿ.ಆರ್. ಅಭಿಪ್ರಾಯಪಟ್ಟರು. ಭಾಷಾ ಕೌಶಲ್ಯ ಇತ್ತೀಚೆಗೆ ಮರೆಮಾಚುತ್ತಿದೆ. ನಮ್ಮ ಆಲೋಚನೆ, ಯೋಚನೆ, ಯಾವತ್ತಿಗೂ ಮಾತೃ ಭಾಷೆಯಲ್ಲೇ ಇರುತ್ತದೆ. ಹೃದಯದಿಂದ ಬರುವಂತದ್ದು ಮಾತೃ ಭಾಷೆಯಾಗಿದೆ ಎಂದು ಹೇಳಿದರು.