ಭಾಷೆ ಬದುಕಿನ ವಿಸ್ತರಣೆ: ಸವಿತಾ ನಾಗಭೂಷಣ
Nov 28 2024, 12:34 AM ISTತರೀಕೆರೆ, ಭಾಷೆ ನಮ್ಮ ಬದುಕಿನ ವಿಸ್ತರಣೆಯಾಗಿದೆ ಒಂದಕ್ಕೊಂದು ಪೂರಕವಾಗಿದೆ ಎಂದು ಕವಯಿತ್ರಿ ಸವಿತಾ ನಾಗಭೂಷಣ ಹೇಳಿದ್ದಾರೆ.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಏರ್ಪಡಸಿದ್ದ ಕನ್ನಡ ನುಡಿಹಬ್ಬ-2024 ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಹತ್ತು ಹಲವು ಭಾಷೆಗಳಿರಬಹುದು. ಆದರೆ ಪ್ರತಿಯೊಬ್ಬರಿಗೂ ಹೃದಯದ ಭಾಷೆ ಒಂದು ಇರುತ್ತದೆ. ಅದು ನಮ್ಮ ತಾಯಿನುಡಿಯಿಂದ ನಮಗೆ ಧಕ್ಕುತ್ತದೆ. ಈ ಭಾಷೆಯನ್ನು ನಾವು ಕಾಪಿಟ್ಟುಕೊಂಡರೆ, ಅದು ನಮ್ಮನ್ನು ಬದುಕಿನುದ್ದಕ್ಕೂ ಪೋಷಿಸುತ್ತದೆ ಎಂದು ತಿಳಿಸಿದರು.