ಒತ್ತುವರಿ ಭೂಮಿ ಗುತ್ತಿಗೆಗಾಗಿ ಬೆಳೆಗಾರರ ಆಸಕ್ತಿ
Dec 30 2024, 01:01 AM ISTಒತ್ತುವರಿ ಭೂಮಿ ಗುತ್ತಿಗೆ ನೀಡುವ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಬೆಳೆಗಾರರ ಪರವಾದ ನಿಲುವನ್ನು ಪ್ರಕಟಿಸಿ ಯೋಜನೆ ಕಾರ್ಯಗತಕ್ಕೆ ಅಂದಿನ ಕಂದಾಯ ಸಚಿವ ಆರ್. ಅಶೋಕ್ ಸಾಕಷ್ಟು ಚರ್ಚೆ ನಡೆಸಿದ್ದರು. ಯೋಜನೆ ಜಾರಿಯ ವೇಳೆಗೆ ಸರ್ಕಾರ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಯೋಜನೆಗೆ ಗ್ರಹಣ ಹಿಡಿದಿತ್ತು. ಆದರೆ, ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಸಂಘಟನೆಗಳ ಮುಖಂಡರ ನಿರಂತರ ಒತ್ತಡದ ಪರಿಣಾಮ ರಾಜ್ಯ ಸರ್ಕಾರ ಕೊನೆಗೂ ಯೋಜನೆಗೆ ಅಸ್ತು ಎಂದಿದೆ.