ಕುಶಾಲನಗರ ಸುತ್ತಮುತ್ತ ಭೂಮಿ ಕಂಪನ ಅನುಭವ
Aug 24 2024, 01:22 AM ISTಹೆಬ್ಬಾಲೆ, ಹಕ್ಕೆ, ಕೂಡು ಮಂಗಳೂರು, ಮುಳ್ಳುಸೋಗೆ, ಕುಶಾಲನಗರ, ಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ಸುಮಾರು 6.30ರ ವೇಳೆಗೆ ಭೂಮಿ ಕಂಪಿಸಿರುವುದಾಗಿ ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.ಕೆಲವೇ ಸೆಕೆಂಡುಗಳ ಕಾಲ ನಡೆದ ಈ ಘಟನೆಯಿಂದ ಈ ಭಾಗದ ಗ್ರಾಮಾಂತರ ಪ್ರದೇಶದ ಜನತೆ ತಲ್ಲಣಗೊಂಡ ದೃಶ್ಯ ಗೋಚರಿಸಿತು. ಭೂಕಂಪನ ಅಧಿಕೃತವಾಗಿ ದೃಢಪಟ್ಟಿಲ್ಲ.