ಮಂಡ್ಯ ಜಿಲ್ಲೆಯಲ್ಲಿ ‘ಕೈ’ಗೆ ಬಲ ತುಂಬಿದ ಪಕ್ಷ ಸೇರ್ಪಡೆ..!
Mar 28 2024, 12:49 AM ISTಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಎಂಬುದು ಗೊತ್ತಾಗುತ್ತಿದ್ದಂತೆ ಜೆಡಿಎಸ್, ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಲು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿಂದ ಪ್ರವಾಹದಂತೆ ಕಾಂಗ್ರೆಸ್ ಕಡೆ ಹರಿದುಬರಲಿದ್ದಾರೆ ಎಂದು ಭವಿಷ್ಯ ನುಡಿದ ಶಾಸಕ ಪಿ.ರವಿಕುಮಾರ, ಕಳೆದ ೩೦ ವರ್ಷದಿಂದ ಜೆಡಿಎಸ್ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಜಿಲ್ಲೆಯನ್ನು ಅಭಿವೃದ್ಧಿಯಿಂದ ವಂಚಿತಗೊಳ್ಳುವಂತೆ ಮಾಡಿದೆ. ಸುಳ್ಳು ಮತ್ತು ಅಭಿವೃದ್ಧಿ ಮೇಲೆ ಈ ಚುನಾವಣೆ ನಡೆಯಲಿದೆ.