ಸರಿ ಹೊತ್ತಿನಲ್ಲೂ ಹಸಿದು ಬಂದವರಿಗೆ ಅನ್ನ ಹಾಕುವ ಕಾನಾಮಡಗು ದಾಸೋಹ ಮಠ
Dec 22 2023, 01:30 AM ISTಕೂಡ್ಲಿಗಿ ತಾಲೂಕಿನ ಕಾನಾಮಡಗು ಶ್ರೀ ಶರಣಬಸವೇಶ್ವರ ಸ್ವಾಮಿ ರಥೋತ್ಸವ ಡಿ. 22ರಂದು ಸಂಜೆ 4 ಗಂಟೆಗೆ ನಡೆಯಲಿದೆ. ದಾಸೋಹ ಮಠದ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಸ್ವಾಮಿಯ ಸುಂದರ ರಥೋತ್ಸವ ಕಾರ್ತೀಕ ಮಾಸದಲ್ಲಿ ನಡೆಯುವುದು ಈ ಭಾಗದಲ್ಲಿ ಅಪರೂಪವೇ ಸರಿ. ಈ ಭಾಗದ ರೈತರು, ಭಕ್ತರು ತಮ್ಮ ಜಮೀನುಗಳಲ್ಲಿ ಬೆಳೆದ ಮೊದಲ ಫಸಲು ಇಲ್ಲಿಯ ದಾಸೋಹಮಠಕ್ಕೆ ತಂದು ಅರ್ಪಿಸುತ್ತಾರೆ.