ಶೃಂಗೇರಿಯಲ್ಲಿ ಮುಸ್ಲಿಂ ಭಾಂದವರಿಂದ ಸಂಭ್ರಮ ಸಡಗರದ ಬಕ್ರೀದ್ ಆಚರಣೆ
Jun 08 2025, 02:40 AM ISTಶೃಂಗೇರಿ: ತಾಲೂಕಿನಾದ್ಯಂತ ಶನಿವಾರ ಮುಸ್ಲಿಂ ಭಾಂದವರು ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಬೆಳಿಗ್ಗೆ ಪಟ್ಟಣದ ಜಾಮೀಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಉಪನ್ಯಾಸ, ಕುರಾನ್ ಪಠಣ ನಡೆಯಿತು. ನಮಾಜ್ ನಂತರ ಮಸೀದಿಯಲ್ಲಿ, ಮಸೀದಿ ಎದುರು ಹಿರಿಯರು, ಮಕ್ಕಳು ಎನ್ನದೇ ಪರಸ್ಪರ ಹಸ್ತಲಾಘವ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.