ಮೊಬೈಲ್ ಬಳಕೆ ಮಕ್ಕಳಲ್ಲಿ ಕಡಿಮೆ ಇರಬೇಕು: ಶಶಿಶೇಖರ ಸಿದ್ದಬಸವ ಸ್ವಾಮೀಜಿ
Jan 31 2024, 02:16 AM ISTಇತ್ತೀಚೆಗೆ ಜನರ ಅತೀ ಹೆಚ್ಚು ಮಟ್ಟದ ಅನ್ವೇಷಣೆಯೆಂದರೆ ಅದು ಮೊಬೈಲ್ ಚಳುವಳಿಯೇ ಆಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದರಿಂದ ಅನುಕೂಲ, ಅನಾನುಕೂಲ ಎರಡೂ ಇದೆ. ಯೂಟ್ಯೂಬ್, ಪೇಸ್ಬುಕ್, ಟ್ವಿಟರ್, ವ್ಯಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳು ಜನರ ಪ್ರತಿಭೆಯನ್ನು ಭಾವನೆಗಳನ್ನು ಹೊರಹಾಕಲು ಸುಂದರವಾದ ವೇದಿಕೆಯೂ ಆಗಿದೆ. ವಿಕೃತ ಮನಸ್ಸುಗಳ ವಿಕೃತ ಅಭಿಪ್ರಾಯಗಳಿಗೂ ವೇದಿಕೆ ಒದಗಿಸುತ್ತದೆ ಎಂದು ಬೂದಿಹಾಳ್ ವಿರಕ್ತ ಮಠದ ಪೀಠಾಧಿಪತಿ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಹೇಳಿದರು. ಅರವಿಂದ ವೈಭವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.