ಪ್ರಧಾನಿ ಜನ್ಮದಿನ: ನವಜಾತ ಶಿಶುವಿಗೆ ‘ನರೇಂದ್ರ ಮೋದಿ’ ನಾಮಕರಣ
Sep 18 2024, 01:47 AM ISTಕುಶಾಲನಗರ ತಾಲೂಕಿನ ಸುಂದರ ನಗರದ ನಿವಾಸಿಗಳಾದ ಮಹೇಂದ್ರ-ಜಯಲಕ್ಷ್ಮೀ ದಂಪತಿಗೆ ಮಂಗಳವಾರ ಗಂಡು ಮಗು ಜನಿಸಿದೆ. ಎರಡು ದಿನಗಳ ಹಿಂದೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಜಯಲಕ್ಷ್ಮೀ ದಾಖಲಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಆಸ್ಪತೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಂಪತಿ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರು ಇಟ್ಟಿದ್ದಾರೆ.