ಬೇಲೂರಿನ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಗುಜರಿ ವಾಹನಗಳ ತೆರವು
Sep 12 2024, 01:54 AM ISTಬೇಲೂರು ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್, ಹಳೇಬೀಡು ರಸ್ತೆ,ಹಾಸನ , ಚಿಕ್ಕಮಗಳೂರು ರಸ್ತೆಯ ಫೂಟ್ಪಾತ್ನಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಇನ್ನಿತರ ವಸ್ತುಗಳನ್ನು ತೆರವು ಮಾಡಲಾಯಿತು. ಪಟ್ಟಣದ ಹಳೇಬೀಡು, ಹಾಸನ, ಚಿಕ್ಕಮಗಳೂರು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವಾಹನ ರಿಪೇರಿ ಸೇರಿದಂತೆ ಹಲವು ಬಗೆಯ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಗುಜರಿಗೆ ಸೇರುವ ಹಳೆಯ ವಾಹನಗಳನ್ನು ನಿಲ್ಲಿಸಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದ ಕಾರಣ ಪುರಸಭೆ ಅಧ್ಯಕ್ಷ ಎ. ಆರ್ ಅಶೋಕ್ ನೇತೃತ್ವದಲ್ಲಿ ಅವುಗಳನ್ನೆಲ್ಲಾ ತೆರವು ಮಾಡಲಾಯಿತು.