ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
Aug 28 2024, 12:49 AM ISTಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದ ಹೀರೆಕೆರೆ ಸಮೀಪದ ವಾಸದ ಮನೆಗಳಿಗೆ ತೆರಳುವ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಳೆದ ಹತ್ತರು ವರ್ಷದಿಂದ ಹೀರೆಕೆರೆ ದಂಡೆಯಲ್ಲಿ ಬದಿಯಲ್ಲಿ ಸುಮಾರು ೧೦ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಪ್ರಮುಖ ಉದ್ಯೋಗ ಹೈನುಗಾರಿಕೆಯಾಗಿದೆ. ಬೆಳಿಗ್ಗೆ ಸಂಜೆ ಇಲ್ಲಿಂದ ಹಾಲು ತೆಗೆದುಕೊಂಡು ಡೇರಿಗೆ ಹಾಲು ಹಾಕಲು, ವಿದ್ಯಾರ್ಥಿಗಳು, ಮಕ್ಕಳು ವೃದ್ಧರು ಪರದಾಡುವಂತಾಗಿದೆ. ವಯೋವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೆಸರು ರಸ್ತೆಯಲ್ಲಿ ಸಾಧ್ಯವಾಗುತ್ತಿಲ್ಲ ಎಂದರು.