ಪುಟ...2ಕ್ಕೆ...ನಿರ್ವಹಣೆ ಇಲ್ಲದೇ ಪಾಳುಬಿದ್ದ ರೈತ ಭವನ
Jun 25 2025, 11:47 PM ISTಕನ್ನಡಪ್ರಭ ವಾರ್ತೆ ಇಂಡಿ ಹಳ್ಳಿಗಳಿಂದ ಕೃಷಿ ಮಾರುಕಟ್ಟೆಗೆ ಬರುವ ರೈತರಿಗೆ ವಾಸದ ಮನೆಯಾಗಿರಬೇಕಿದ್ದ ಇಂಡಿ ರೈತ ಭವನ ನಿರ್ವಹಣೆಯ ಕೊರತೆಯಿಂದಾಗಿ ಅನ್ನದಾತರಿಂದ ದೂರವಾಗುತ್ತಿದೆ. ದುರಸ್ತಿ ಹೆಸರಿನಲ್ಲಿ ಹಣ ಖರ್ಚು ಮಾಡಿದರೂ ರೈತರಿಗೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. ಮುರಿದ ಕಿಟಕಿ, ಬಾಗಿಲು, ತುಕ್ಕು ಹಿಡಿದ ಮುಖ್ಯಬಾಗಿಲು, ಭವನದ ಒಳಗಡೆ ಮಣ್ಣು, ಕಸದ ರಾಶಿಯೇ ತುಂಬಿಕೊಂಡಿದೆ.. ತುಂಬಿಕೊಂಡಿದೆ. ರೈತರ ವಾಸಸ್ಥಾನವಾಗಬೇಕಿದ್ದ ಈ ಭವನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳಚೆಯಿಂದ ತುಂಬಿಕೊಂಡು ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.