ರೈತರು ಋತು ಆಧಾರಿತ ಬೆಳೆ ಪದ್ಧತಿ ಅಳವಡಿಕೆಗೆ ಮುಂದಾಗಲಿ
Dec 24 2023, 01:45 AM ISTಶನಿವಾರ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಡಾ. ಕವಿತಾ ಮಿಶ್ರಾ, ರೈತರು ಇಂದಿಗೂ ಋತು ಆಧಾರಿತ ಬೆಳೆ ಬೆಳೆಯಲು ಆದ್ಯತೆ ನೀಡುತ್ತಿಲ್ಲ. ಹವಾಮಾನದ ವೈಪರೀತ್ಯದಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅರಿವು ಹೊಂದಬೇಕಿದೆ ಎಂದರು.