‘ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಭೂ-ವಿವರ ನೋಂದಾಯಿಸಿ’
Oct 28 2023, 01:15 AM ISTಸರ್ಕಾರದ ಯಾವುದೇ ಸವಲತ್ತು ಪಡೆಯಲು ಫ್ರೂಟ್ಸ್ ತಂತ್ರಾಂಶದ ನೋಂದಣಿಯು ಕಡ್ಡಾಯವಾಗಿದ್ದು, ಕೂಡಲೇ ಎಲ್ಲಾ ರೈತರು ತಮ್ಮ ಮಾಲೀಕತ್ವಕ್ಕೆ ಒಳಪಡುವ ಎಲ್ಲಾ ಸರ್ವೆ ನಂಬರ್‌ಗಳನ್ನು (ಭೂ ಹಿಡುವಳಿಯನ್ನು) ಸಂಬಂಧಪಟ್ಟ ದಾಖಲಾತಿಯೊಂದಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ. ಪ್ರೂಟ್ಸ್ ತಂತ್ರಾಂಶದಲ್ಲಿ ರೈತರ ವೈಯಕ್ತಿಕ ಮಾಹಿತಿ, ಜಮೀನಿನ, ಬೆಳೆಯ ವಿವರ ಹಾಗೂ ಈ ಹಿಂದೆ ಸರ್ಕಾರದಿಂದ ಪಡೆದ ಎಲ್ಲಾ ಇಲಾಖೆಗಳ ಸವಲತ್ತಿನ ವಿವರ ಒಳಗೊಂಡಿರುತ್ತದೆ