ಬಸ್ ಹಾಗೂ ಬೊಲೆರೋ ವಾಹನ ನಡುವೆ ಡಿಕ್ಕಿ
Aug 25 2024, 02:07 AM ISTಅರಸೀಕೆರೆ ತಾಲೂಕಿನ ಬಾಣಾವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಶಾನೆಗೆರೆ ಸಮೀಪ ಬಸ್ ಹಾಗೂ ಬುಲೆರೋ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಎರಡೂ ವಾಹನಗಳು ಜಖಂ ಆಗಿರುವ ಘಟನೆ ನಡೆದಿದೆ. ಬಾಣಾವರದ ಕಡೆಗೆ ಬರುತ್ತಿದ್ದ ಬುಲೆರೋ ವಾಹನ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಜಖಂ ಆಗಿದ್ದು, ಬಸ್ಸಿನ ಮುಂಭಾಗದ ಎರಡು ಚಕ್ರಗಳು ಮರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.