ಅಪರಾಧಿಯಾಗದಿರಲು ವಿವೇಕ ಕೊಟ್ಟ ಶಿಕ್ಷಣ: ಡಾ.ರಾಜಪ್ಪ ದಳವಾಯಿ
May 10 2025, 01:06 AM ISTಚಿಂತೆಯೇ ಮುಪ್ಪು. ಮಾನಸಿಕವಾಗಿ ಕುಗ್ಗಿದರೆ ಸಾವಿನ ಸಮೀಪ ಸರಿದಂತೆ. ಇದಕ್ಕಾಗಿ ಉತ್ಸಾಹದಿಂದ ಇರುವುದರ ಜೊತೆಗೆ ಓದಿಗಿಂತ ದೊಡ್ಡ ಸುಖ, ಸಂಪತ್ತು ಬೇರೇನಿಲ್ಲ ಎಂಬ ಸತ್ಯ ಅರಿಯಿರಿ. ದೇವನೂರ ಮಹಾದೇವ ಅವರ ‘ಬಂಡೆಯ ಮೇಲೆ ಚಿಗುರೊಡೆಯಬೇಕು’ ಎಂಬ ಮಾತನ್ನು ಮನಗಾಣಿರಿ. ಶಿಕ್ಷೆಯ ಅವಧಿಯನ್ನು ಲೆಕ್ಕ ಹಾಕದೆ ಸಾಹಿತ್ಯ ಓದಿ, ಹೆಚ್ಚಿನ ಅಧ್ಯಯನ ಕೈಗೊಳ್ಳಿ.