ಎಸ್.ಪಿ.ಮುದ್ದಹನುಮೇಗೌಡರ ಪರ ಸಚಿವ ರಾಜಣ್ಣ ಮತಬೇಟೆ
Apr 13 2024, 01:03 AM ISTತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೊರಗಿನವರು. ಅವರಿಗೆ ಓಟು ಹಾಕಿದರೆ ದೂರದ ಬೆಟ್ಟ ನುಣ್ಣಗೆ ಇದ್ದಂಗಷ್ಟೆ, ಅವರನ್ನು ನಂಬಿ ಕೆಲಸ ಮಾಡಕ್ಕಾಗಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಸ್ಥಳೀಯರು ಅವರಿಗೆ ಮತ ನೀಡಿ. ಮತದಾರರು ತಮ್ಮ ಅಸ್ತಿತ್ವ ತೋರಿಸುವ ಮೂಲಕ ಎಸ್ಪಿಎಂ ಗೆಲುವಿಗೆ ಶ್ರಮಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆಯಿತ್ತರು.