ಕೆಲಸ ಮಾಡದ ಪಿಡಿಒಗಳನ್ನು ಅಮಾನತು ಮಾಡಿ-ಸಚಿವ ಶಿವಾನಂದ ಪಾಟೀಲ
Jul 03 2024, 12:16 AM ISTಕೆಲಸ ಮಾಡದವರು, ಕುಡಿದು ಬರುವ ಪಿಡಿಒಗಳನ್ನು ಶಾಸಕರು ಬೇರೆಡೆ ವರ್ಗಾವಣೆ ಮಾಡಿದರೆ ಅವರು ಕೆಎಟಿಯಿಂದ ತಡೆಯಾಜ್ಞೆ ತರುತ್ತಾರೆ ಎಂದರೆ ಉಪ ಕಾರ್ಯದರ್ಶಿಗೆ ಪಿಡಿಒಗಳ ಮೇಲೆ ಹಿಡಿತವಿಲ್ಲ ಎಂದರ್ಥ. ಯಾರ್ಯಾಪರು ತಡೆಯಾಜ್ಞೆ ತಂದಿದ್ದಾರೋ ಅವರ ಕಾರ್ಯಕ್ಷಮತೆ ಸರಿಯಿಲ್ಲದಿದ್ದರೆ ತಕ್ಷಣ ಅಮಾನತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.