5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಜಗ್ಗಿಸಲು-ಬಗ್ಗಿಸಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಧ್ಯಂತರ ಜಾಮೀನು ಪಡೆದು ಐದು ವಾರವಾದರೂ ಚಿಕಿತ್ಸೆ ಪಡೆದಿಲ್ಲ. ತನ್ಮೂಲಕ ನ್ಯಾಯಾಲಯದ ಅನುಕಂಪ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ರದ್ದುಪಡಿಸಬೇಕು. ಹೀಗಂತ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಶುಕ್ರವಾರ ಬಲವಾಗಿ ವಾದ ಮಂಡಿಸಿದರು.
ಗಣಿಗಾರಿಕೆ ಮಾಡುವವರಿಗಷ್ಟೇ ತೆರಿಗೆ ಹಾಕುತ್ತಿದ್ದ ಸರ್ಕಾರ ಇದೀಗ ಗಣಿ ಭೂಮಿಯ ಮಾಲೀಕರಿಗೂ ತೆರಿಗೆ ಹಾಕಲು ಮುಂದಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಭೂಮಿ ಮಾಲೀಕರಿಂದ ಪ್ರತಿ ಟನ್ ಖನಿಜಕ್ಕೆ 100 ರು.ನಂತೆ ಹೊಸದಾಗಿ ಖನಿಜ ಹಕ್ಕುಗಳ ತೆರಿಗೆ ಸಂಗ್ರಹ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.