ಕನ್ನಡನಾಡಿನ ಹಿತ ಕಾಪಾಡಲು ಸರ್ಕಾರ ಕಂಕಣಬದ್ಧ
Jul 09 2024, 12:49 AM ISTಈ ಹಿಂದೆ ಕನ್ನಡನಾಡಿಗೆ ಇದ್ದ ಮೈಸೂರು ರಾಜ್ಯ ಎಂಬ ಹೆಸರನ್ನು ತೆಗೆದು ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷಗಳು ಪೂರೈಸಿವೆ. ಈ ಹಿನ್ನೆಲೆ ನಮ್ಮ ಸರ್ಕಾರ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ " ಎಂಬ ಘೋಷವಾಕ್ಯ ಒಳಗೊಂಡ ಕನ್ನಡ ರಥಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಚಾಲನೆ ನೀಡಿದೆ. ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಈ ರಥಯಾತ್ರೆ ಚನ್ನಗಿರಿಗೆ ಬಂದಿರುವುದು ನಮ್ಮಗಳ ಪುಣ್ಯ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಚನ್ನಗಿರಿಯಲ್ಲಿ ಹೇಳಿದ್ದಾರೆ.