ನದಿಗೆ ಹಾರಿದ ಸರ್ಕಾರಿ ನೌಕರನಿಗೆ ಮುಂದುವರಿದ ಶೋಧ
Jul 26 2024, 01:32 AM ISTಕುಶಾಲನಗರದಲ್ಲಿ ಬುಧವಾರ ಕಾವೇರಿ ನದಿಗೆ ಹಾರಿದ ವ್ಯಕ್ತಿಯ ದೇಹ ಪತ್ತೆಗೆ ಶೋಧಕಾರ್ಯ ಭರದಿಂದ ಸಾಗಿದೆ. ಗುರುವಾರ ಸಂಜೆ ತನಕ ಯಾವುದೇ ಕುರುಹು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ನದಿಗೆ ಹಾರಿ ನಾಪತ್ತೆಯಾದ ಸರ್ಕಾರಿ ನೌಕರ ಅರುಣ್ (50) ಪತ್ತೆಗೆ ಶೋಧ ಕಾರ್ಯ ನಡೆಸುವ ಸಂಬಂಧ ಐದು ತಂಡಗಳು ಕುಶಾಲನಗರದಿಂದ ಕೂಡಿಗೆ ಕಣಿವೆ ಭಾಗಗಳಲ್ಲಿ ಶೋಧ ನಡೆಸುತ್ತಿವೆ.