ಸಿಎಂ ಸಿದ್ದರಾಮಯ್ಯನವರಿಗೆ 136 ಶಾಸಕರು ಬಂಡೆಗಲ್ಲಾಗಿ ನಿಲ್ಲುತ್ತೇವೆ
Sep 25 2024, 12:45 AM ISTಕನ್ನಡಪ್ರಭ ವಾರ್ತೆ ಇಂಡಿ ರಾಜ್ಯಪಾಲರ ಕಚೇರಿಯನ್ನು ಬಿಜೆಪಿಯ ರಾಷ್ಟ್ರೀಯ ಕೇಂದ್ರ ಕಚೇರಿಯನ್ನಾಗಿ ಮಾಡಿಕೊಂಡು ಘನವೆತ್ತ ರಾಜ್ಯಪಾಲರ ಸಂವಿಧಾನ ಬದ್ಧ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಯ ನಡೆ ಖಂಡಿಸುತ್ತೇನೆ. ಬಿಜೆಪಿಯವರ ಕುತಂತ್ರಕ್ಕೆ ಎದೆ ಸೆಟೆದು ನಿಂತು ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ 136 ಶಾಸಕರು ಬಂಡೆಗಲ್ಲಾಗಿ ಅವರ ಹಿಂದೆ ನಿಲ್ಲುತ್ತೇವೆ ಎಂದು ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ ವಿರೋಧ ಪಕ್ಷದವರ ವಿರುದ್ಧ ಗುಡುಗಿದರು.