17 ವರ್ಷ ‘ನೊಂದಿದ್ದಕ್ಕೆ’ 1 ವರ್ಷ ಜೈಲು ಶಿಕ್ಷೆ ಕಡಿತ!ಲಂಚ ಪಡೆದು ಸಿಕ್ಕಿಬಿದ್ದು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರಿ ನೌಕರನೊಬ್ಬ ಕ್ರಿಮಿನಲ್ ಪ್ರಕರಣ ಎದುರಿಸಿದ 17 ವರ್ಷ ಅವಧಿಯಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ನೊಂದಿರುವ ಸಂಗತಿ ಪರಿಗಣಿಸಿರುವ ಹೈಕೋರ್ಟ್, ಶಿಕ್ಷೆ ಪ್ರಮಾಣವನ್ನು ಶೇ.50ರಷ್ಟು ತಗ್ಗಿಸಿದೆ.