ಬೈಕ್ ಸವಾರರಿಂದ ‘ಫೋನ್ ಪೇ’ ಮೂಲಕ ದರೋಡೆ...!ನಿಡಘಟ್ಟ ಗ್ರಾಮದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಆರು ಮಂದಿ ದುಷ್ಕರ್ಮಿಗಳು ಬೈಕ್ ಸವಾರರಿಗೆ ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ನಂತರ 50 ಸಾವಿರಕ್ಕೆ ಬೇಡಿಕೆ ಇಟ್ಟ ಆರೋಪಿಗಳು ಯಾಸಿನ್ ಬಳಿ ಇದ್ದ 17,000 ಹಾಗೂ ಅಬ್ದುಲ್ ರೆಹಮಾನ್ ಬಳಿ ಇದ್ದ 5000 ಹಣವನ್ನು ದೋಚಿದ್ದಾರೆ. ನಂತರ ಅಬ್ದುಲ್ ಫೋನ್ ನಿಂದ 9 ಸಾವಿರ ರು. ಗಳನ್ನು ಫೋನ್ ಪೇ ಮಾಡಿಕೊಂಡು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.