ಪೊಲೀಸ್ ಕಾರಲ್ಲೇ ರನ್ಯಾ ಸ್ಮಗ್ಲಿಂಗ್?ತಮ್ಮ ಮಲ ತಂದೆಯೂ ಆಗಿರುವ ಡಿಜಿಪಿ ಅವರ ಹೆಸರು ಬಳಸಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ (ಪ್ರೋಟೋಕಾಲ್) ಉಪಯೋಗಿಸಿಕೊಂಡಿರುವುದು ಮಾತ್ರವಲ್ಲ, ಚಿನ್ನ ಕಳ್ಳ ಸಾಗಾಣಿಕೆಗೆ ಸರ್ಕಾರಿ ಕಾರನ್ನು ಕೂಡ ನಟಿ ರನ್ಯಾರಾವ್ ಬಳಸಿರಬಹುದು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳ ತನಿಖೆಯಲ್ಲಿ ಅನುಮಾನ ವ್ಯಕ್ತವಾಗಿದೆ.