ಬೆಳ್ಳಿ ಆಭರಣ ತಯಾರಿಸುವ ಅಂಗಡಿಯಲ್ಲಿ 20 ಕೆ.ಜಿ. ಬೆಳ್ಳಿ ಕಳವು ಮಾಡಿದ್ದ ಇಬ್ಬರು ಸೆರೆ: ಕದ್ದ ಮಾಲು ಜಪ್ತಿಬೆಳ್ಳಿ ಆಭರಣ ತಯಾರಿಸುವ ಅಂಗಡಿಯಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಬೆಳ್ಳಿ ಗಟ್ಟಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 10 ಲಕ್ಷ ರು. ಮೌಲ್ಯದ 11 ಕೆ.ಜಿ. 933 ಗ್ರಾಂ ಬೆಳ್ಳಿಗಟ್ಟಿ ಜಪ್ತಿ ಮಾಡಿದ್ದಾರೆ.