ಪತ್ನಿ ಕೊಂದು ಸಂಪ್ಗೆ ಹಾಕಿ ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ ಬಂಧನಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ ಚೌಡಪ್ಪ, 6 ತಿಂಗಳ ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಶಿವಮಣಿ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದಾಗ, ಪೊಲೀಸರು ಚೌಡಪ್ಪನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಮಂಗಳವಾರ ಮತ್ತೆ ಶಿವಮಣಿಯೊಂದಿಗೆ ಚೌಡಪ್ಪ ಗಲಾಟೆ ಮಾಡಿದ್ದು, ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.