ಹಣ, ಚಿನ್ನಾಭರಣ ಪಡೆದು ವಂಚನೆ: ಐಶ್ವರ್ಯಗೌಡ ವಿರುದ್ಧ ಮತ್ತೊಂದು ದೂರು ದಾಖಲುಚಾಮುಂಡೇಶ್ವರಿ ನಗರದ ನಿವಾಸಿ ಸೌಭಾಗ್ಯ ಅವರು ಐಶ್ವರ್ಯಗೌಡ ವಿರುದ್ಧ ದೂರು ದಾಖಲಿಸಿದ್ದು, ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವವರ ವಿರುದ್ಧ ರಿಯಲ್ ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಮೋಸ ಮಾಡಿರುವ ಬಗ್ಗೆ ಐಪಿಸಿ ಸೆಕ್ಷನ್ 406, 420, 417,120 ಬಿ, 540, 34 ರ ಅಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.