ತಾನು ಕೆಲಸ ಮಾಡುವ ಹೋಟೆಲ್ನಲ್ಲೇ ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ಕಳವು ಮಾಡಿದ್ದ ಮ್ಯಾನೇಜರ್ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಸುಮಾರು 4.50 ಲಕ್ಷ ರು. ಮೌಲ್ಯದ ಹಿತ್ತಾಳೆ ವಸ್ತಗಳನ್ನು ಜಪ್ತಿ ಮಾಡಿದ್ದಾರೆ.
ಮಲೇಷಿಯಾದ ಕಂಪನಿಯಲ್ಲಿ ₹2 ಕೋಟಿ ಹೂಡಿಕೆ ಮಾಡಿದರೆ ಒಂದೇ ದಿನದಲ್ಲಿ ಲಾಭಾಂಶ ಸೇರಿಸಿ ₹3.50 ಕೋಟಿ ಕೊಡುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ₹2 ಕೋಟಿ ಪಡೆದು ವಂಚಿಸಿದ್ದ ಏಳು ಮಂದಿ ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಿನ್ನತೆಯಲ್ಲಿದ್ದ ಈಕೆ ಶನಿವಾರ ರಾತ್ರಿ ಮನೆಯಲ್ಲಿ ಮೂರು ವರ್ಷದ ಪುತ್ರ ದೀಕ್ಷಿತ್ಗೆ ನೇಣು ಹಾಕಿದ್ದಾಳೆ. ಪುತ್ರಿ ಧನುಶ್ರೀಗೆ ಕೂಡ ನೇಣು ಹಾಕಲು ಮುಂದಾಗಿದ್ದಾಳೆ. ಧನುಶ್ರೀ ಭಯದಿಂದ ಮನೆಯಿಂದ ಹೊರಗಡೆ ಓಡಿ ಹೋಗಿದೆ. ತದನಂತರ ತಾನೂ ಕೂಡ ನೇಣು ಬಿಗಿದುಕೊಂಡು ಮೃತಳಾಗಿದ್ದಾಳೆ
ಸಂಚಾರಿ ಪೊಲೀಸರ ತಪಾಸಣೆಯನ್ನು ತಪ್ಪಿಸಿಕೊಳ್ಳಲು ಯುವಕರು ಬ್ಯಾರಿಕೇಟ್ ಹಾಗೂ ಮತ್ತೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ನಗರದ ನಂದಾ ಸರ್ಕಲ್ನಲ್ಲಿ ನಡೆದಿದೆ.
ಗೋವುಗಳನ್ನು ಆರಾಧಿಸುಚ ಸಂಕ್ರಾಂತಿಗೂ ಮುನ್ನ ಬೆಂಗಳೂರಿನಲ್ಲಿ ಪೈಚಾಚಿಕ ಘಟನೆಯೊಂದು ನಡೆದಿದ್ದು, ನಗರದ ಮನೆಯೊಂದರ ಶೆಡ್ನಲ್ಲಿ ಕಟ್ಟಿಹಾಕಿದ್ದ 3 ಸೀಮೆ ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದು, ಕ್ರೂರತೆ ಮೆರೆದ ಘಟನೆ ನಡೆದಿದೆ.