ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ಹೊಸ ಅಲೆ : ಭಾರತದಿಂದಲೂ ಶೀಘ್ರ ಡೀಪ್ ಸೀಕ್ ಮಾದರಿ ಎಐಚೀನಾದ ಡೀಪ್ಸೀಕ್ ಆ್ಯಪ್, ಜಾಗತಿಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಹೊತ್ತಿನಲ್ಲೇ, ಭಾರತ ಕೂಡಾ ಶೀಘ್ರವೇ ತನ್ನದೇ ಆದ ಜನರೇಟಿವ್ ಎಐ ಮಾಡೆಲ್ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಪ್ರಕಟಿಸಿದ್ದಾರೆ.