ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮೀಯರಿಗೂ ಸಮಾನ ಕಾನೂನಿಗೆ ಅವಕಾಶ ಮಾಡಿಕೊಡುವ ಏಕರೂಪದ ನಾಗರಿಕ ಸಂಹಿತೆ ಸೋಮವಾರದಿಂದ ಉತ್ತರಾಖಂಡ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ.
ಲಡಾಖ್ ಸಮೀಪದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಮೂಲಕ ಭಾರತಕ್ಕೆ ಭಾರೀ ಅಪಾಯ ಒಡ್ಡಲು ಮುಂದಾಗಿದ್ದ ಚೀನಾದ ತಂತ್ರಕ್ಕೆ ಇದೀಗ ಭಾರತ ಕೂಡಾ ಪ್ರತಿತಂತ್ರ ಹೆಣೆದಿದೆ.
ವಿವಾಹೇತರ ಪ್ರೇಮ, ದೈಹಿಕ ಸಂಬಂಧಗಳೂ, ವೈವಾಹಿಕ ಜೀವನ ಹಾಳು ಮಾಡುತ್ತಿರುವ ಹೊತ್ತಿನಲ್ಲೇ, ವಿವಾಹೇತರ ಸಂಬಂಧ ಬೆಸೆಯಲು ಇರುವ ಗ್ಲೀಡನ್ ಎಂಬ ಆ್ಯಪ್ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ಶೇ.20ರಷ್ಟು ಬಳಕೆದಾರರೊಂದಿಗೆ ನಂ.1 ಸ್ಥಾನದಲ್ಲಿದೆ
ಭಾನುವಾರ ದೆಹಲಿಯ ಕರ್ತವ್ಯಪಥದಲ್ಲಿ ನಡೆದ 76ನೇ ಗಣರಾಜ್ಯ ದಿನದ ಕಾರ್ಯಕ್ರಮವು 5 ಪ್ರಥಮಗಳಿಗೆ ಸಾಕ್ಷಿಯಾಯಿತು. ‘ಪ್ರಳಯ್’ ಕ್ಷಿಪಣಿಯಿಂದ ಹಿಡಿದು ಸೇನೆಯ ಮೂರೂ ವಿಭಾಗಗಳ ಸಂಯೋಜಿತ ಸ್ತಬ್ಧಚಿತ್ರ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಜನ ಕಣ್ತುಂಬಿಕೊಂಡರು.
ದೇಶಾದ್ಯಂತ ಏಕರೂಪ ಸಮಯಪಾಲನೆ ಮತ್ತು ಪ್ರದರ್ಶನಕ್ಕಾಗಿ ಕೇಂದ್ರ ಸರ್ಕಾರ ಕಾನೂನು ಮಾಪನ ವಿಜ್ಞಾನ ಅಧಿನಿಯಮ 2025 ಅನ್ನು ಸಿದ್ಧಪಡಿಸಿದೆ. ಈ ನೀತಿಯು ದೇಶದ ಎಲ್ಲ ಸರ್ಕಾರಿ, ಖಾಸಗಿ, ವಾಣಿಜ್ಯ, ಶೈಕ್ಷಣಿಕ, ಕಾನೂನು ಸಂಸ್ಥೆಗಳಲ್ಲಿ ಒಂದೇ ರೂಪದ ಸಮಯ ಪ್ರದರ್ಶನ ಕಡ್ಡಾಯಗೊಳಿಸಲಿದೆ.