ಭಾರತದ ಅತೀ ದೊಡ್ಡ ಕಲೆ, ಸಂಸ್ಕೃತಿಯ ವಾರ್ಷಿಕ ಸಮ್ಮೇಳನವಾದ ಭಾವ್ 2025: ದಿ ಎಕ್ಸ್ಪ್ರೆಷನ್ಸ್ ಸಮ್ಮಿಟ್ ಜ. 23ರಿಂದ 26ರವರೆಗೆ ನಡೆಯಲಿದೆ.
ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಆಕೆಯ ದೇಹದ ಭಾಗಗಳನ್ನು ಕತ್ತರಿಸಿ, ಕುಕ್ಕರ್ನಲ್ಲಿ ಬೇಯಿಸಿ ಬಳಿಕ ಆಕೆಯ ಶವದ ತುಂಡುಗಳನ್ನು ಕೆರೆಗೆ ಎಸೆದು ನೀಚತನ ಮೆರೆದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಶವದ ತುಂಡುಗಳಿಗೆ ಈಗ ಪೊಲೀಸರು ಶೋಧ ಆರಂಭಿಸಿದ್ದಾರೆ.
‘ಅಮೆರಿಕದಲ್ಲಿ ನಿಮ್ಮ ಉತ್ಪನ್ನಗಳನ್ನು ತಯಾರಿಸಿ. ಇಲ್ಲದಿದ್ದರೆ ಹೆಚ್ಚುವರಿ ಸುಂಕವನ್ನು ಪಾವತಿಸಿ’ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಟೆಕ್ ಲೋಕದಲ್ಲಿ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿರುವ ಎಲಾನ್ ಮಸ್ಕ್ ಅವರ ಉಪಗ್ರಹದ ಮೂಲಕ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ‘ಸ್ಟಾರ್ಲಿಂಕ್ ಯೋಜನೆ’ ಭಾರತದಲ್ಲಿ ಕಾರ್ಯರೂಪಕ್ಕೆ ಬರುವ ಮೊದಲೇ, ಸ್ವದೇಶಿ ಕಂಪನಿ ಏರ್ಟೆಲ್ ಆ ಸಾಧನೆ ಮಾಡಲು ಸಜ್ಜಾಗಿದೆ ಎಂದು ವರದಿಗಳು ಹೇಳಿವೆ.
ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 10 ದಿನದಲ್ಲಿ 10 ಕೋಟಿಗೂ ಅಧಿಕ ಜನರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಕ್ತಿ (ಎನರ್ಜಿ) ಉತ್ಪಾದನೆಗಾಗಿ ಚೀನಾ ಕೈಗೊಂಡಿರುವ ಪರಮಾಣು ಸಮ್ಮಿಳನ ಪ್ರಯೋಗದ ಭಾಗವಾಗಿ ಸೃಷ್ಟಿಸಲಾಗಿರುವ ‘ಕೃತಕ ಸೂರ್ಯ’ನ ಮೇಲಿನ ಶಾಖವು ಸತತ 1 ಸಾವಿರ ಸೆಕೆಂಡುಗಳ ಕಾಲ (17 ನಿಮಿಷ) 100 ದಶಲಕ್ಷ ಡಿಗ್ರಿ ತಾಪಮಾನದ ಸ್ಥಿರತೆ ಕಾಯ್ದುಕೊಂಡಿದೆ.